Monday 9 October 2017

State Govt Job3


ಎಸ್ಡಿಎ/ಎಫ್ಡಿಎ: ಸೇರ್ಪಡೆ ಅಧಿಸೂಚನೆ
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ನೇಮಕಾತಿ ಮಾಡುವ ಸಲುವಾಗಿ ಕೆಪಿಎಸ್ಸಿ 01.09.2017ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ ಅಧಿಸೂಚನೆಯನ್ನು ಪ್ರಕಟಿಸಿದ ನಂತರದಲ್ಲಿ ಕೆಲವು ನೇಮಕಾತಿ ಪ್ರಾಧಿಕಾರಗಳು ತಮ್ಮ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇರ ನೇಮಕಾತಿಗಾಗಿ ಬೇಡಿಕೆ ಸಲ್ಲಿಸಿದ್ದು, ಕೆಳಕಂಡ ಹುದ್ದೆಗಳನ್ನು ಮುಖ್ಯ ಅಧಿಸೂಚನೆಯಡಿ ಸೇರ್ಪಡೆಗೊಳಿಸಿ ಅರ್ಹ ಅಭ್ಯರ್ಥಿಗಳಿಂದ oಟಿಟiಟಿe ಮೂಲಕ ಅರ್ಜಿ ಪಡೆಯಲು ನಿಗದಿಪಡಿಸಿದ್ದ ದಿನಾಂಕವನ್ನು ವಿಸ್ತರಿಸಲಾಗಿದೆ. ಸದರಿ ಸೇರ್ಪಡೆ ಅಧಿಸೂಚನೆಯಲ್ಲಿನ ಹುದ್ದೆಗಳನ್ನೂ ಸಹ ದಿನಾಂಕ: 01-09-2017 ಅಧಿಸೂಚನೆಯಲ್ಲಿ ನಿರ್ದಿಷ್ಟ ಪಡಿಸಿರುವ ನಿಯಮಗಳನ್ವಯ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗುವುದೆಂಬ ಅಂಶವನ್ನು ಮತ್ತು ಸೇರ್ಪಡೆ ಅಧಿಸೂಚನೆಯ ಹುದ್ದೆಗಳ ವಿವರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಿದೆ.
ಹೊಸದಾಗಿ ಸೇರ್ಪಡೆಯಾದ ಹುದ್ದೆಗಳು
1) ಪ್ರಥಮ ದರ್ಜೆ ಸಹಾಯಕರು:
ಮೊದಲಿನ ಅಧಿಸೂಚನೆಯಲ್ಲಿದ್ದ ಹುದ್ದೆಗಳ ಸಂಖ್ಯೆ: 507
ಹೊಸದಾಗಿ ಸೇರ್ಪಡೆಯಾದ ಹುದ್ದೆಗಳ ಒಟ್ಟು ಸಂಖ್ಯೆ: 454
ಸೇರ್ಪಡೆ ನಂತರ ಒಟ್ಟು ಹುದ್ದೆಗಳ ಸಂಖ್ಯೆ: 961
ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.
2) ದ್ವಿತೀಯ ದರ್ಜೆ ಸಹಾಯಕರು
ಮೊದಲಿನ ಅಧಿಸೂಚನೆಯಲ್ಲಿದ್ದ ಹುದ್ದೆಗಳ ಸಂಖ್ಯೆ: 551
ಹೊಸದಾಗಿ ಸೇರ್ಪಡೆಯಾದ ಹುದ್ದೆಗಳ ಒಟ್ಟು ಸಂಖ್ಯೆ: 300
ಸೇರ್ಪಡೆ ನಂತರ ಒಟ್ಟು ಹುದ್ದೆಗಳ ಸಂಖ್ಯೆ: 851
ವಿದ್ಯಾರ್ಹತೆ: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ನಡೆಸುವ ಪದವಿ ಪೂರ್ವ ಪರೀಕ್ಷೆ (ಪಿಯುಸಿ) ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮೋ ಕೋರ್ಸ್.
ವಿಶೇಷ ಸೂಚನೆ:
1) ಸದರಿ ಸೇರ್ಪಡೆ ಅಧಿಸೂಚನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದಿನಾಂಕ: 01-09-2017 ಅಧಿಸೂಚನೆಯಲ್ಲಿ ಸೂಚಿಸಿರುವ ಎಲ್ಲಾ ಸೂಚನೆ ಮತ್ತು ಷರತ್ತುಗಳು ಸಹ ಅನ್ವಯಿಸುತ್ತದೆ.
2) ದಿನಾಂಕ: 01-09-2017 ಅಧಿಸೂಚನೆಯಂತೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸದರಿ ಸೇರ್ಪಡೆ ಅಧಿಸೂಚನೆಗೆ ಹೊಸ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ.
3) ಕೌನ್ಸಿಲಿಂಗ್ ಮೂಲಕ ಇಲಾಖೆಗಳನ್ನು ಹಂಚಿಕೆ ಮಾಡಲಾಗುವುದರಿಂದ, ಇಲಾಖಾ ಆದ್ಯತೆ ನೀಡುವ/ಬದಲಾಯಿಸುವ ಅವಶ್ಯಕತೆಯೂ ಇರುವುದಿಲ್ಲ.
ದಿನಾಂಕ: 01-09-2017 ಅಧಿಸೂಚನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳೂ ಸೇರಿದಂತೆ ಹೊಸದಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಸದರಿ ಸೇರ್ಪಡೆ ಅಧಿಸೂಚನೆಗೆ ದಿನಾಂಕ: 27-11-2017 ರಿಂದ 12-12-2017 ರಾತ್ರಿ 11.45ಗಂಟೆಯವರೆಗೆ ಅರ್ಜಿ ಸಲ್ಲಿಸಲು ಮತ್ತು ಪರೀಕ್ಷೆಯ ಶುಲ್ಕವನ್ನು ದಿನಾಂಕ: 13-12-2017 ರೊಳಗೆ ಅಂಚೆ ಕಛೇರಿಯ ಕಾರ್ಯದ ವೇಳೆಯೊಳಗೆ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿಗಳನ್ನು ಆಯೋಗದ ಅಂತರ್ಜಾಲ www.kpsc.kar.nic.in ನಲ್ಲಿ Online ಮೂಲಕ ಭರ್ತಿ ಮಾಡಿ ಪರೀಕ್ಷಾ ಶುಲ್ಕವನ್ನು ದಿನಾಂಕ: 27-11-2017ರಿಂದ ಅಂಚೆ ಕಛೇರಿಯ ಕೆಲಸದ ವೇಳೆಯೊಳಗೆ ಕರ್ನಾಟಕ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಅಂಚೆ ಕಛೇರಿಗಳಲಿ ್ಲ ಪಾವತಿ ಮಾಡಬಹುದು. ಸೌಲಭ್ಯಗಳನ್ನು ಹೊರತುಪಡಿಸಿ, ಇತರೆ ಯಾವುದೇ ರೀತಿಯಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ. ಮತ್ತು ಶುಲ್ಕವನ್ನು ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅಭ್ಯರ್ಥಿಗಳು Online ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಅನುಬಂಧ-8ರಲ್ಲಿ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳತಕ್ಕದ್ದು. Online ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಸಂಖ್ಯೆಯನ್ನು ತಪ್ಪದೇ ನಮೂದಿಸಲು ಸೂಚಿಸಿದೆ. ಅರ್ಜಿಯಲ್ಲಿ ನಮೂದಿಸುವ -ಮೇಲ್ವಿಳಾಸ/ಮೊಬೈಲ್ ಸಂಖ್ಯೆ ವಿಶಿಷ್ಟವಾಗಿರಬೇಕು. ನೇಮಕಾತಿ ಪ್ರಕ್ರಿಯೆ ಮುಗಿಯುವವರೆವಿಗೂ ಇದೇ -ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನೇ ಪರಿಗಣಿಸಲಾಗುವುದು ಹಾಗೂ ಇದನ್ನು ಬದಲಾಯಿಸಲು ಅವಕಾಶ ನೀಡಲಾಗುವುದಿಲ್ಲ.
ವಿಶೇಷ ಸೂಚನೆ: Online ಮೂಲಕ ಅರ್ಜಿಯನ್ನು ಭರ್ತಿಮಾಡುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ 9986739013, 9986736594, 9986760557, 8197367453 ಅನ್ನು ಸಂಪರ್ಕಿಸಬಹುದು.
ಆಯೋಗವು ಮೇಲ್ಕಂಡ ಹುದ್ದೆಗಳಿಗೆ ಜನವರಿ 2018 ಕಡೆಯ ವಾರದಲ್ಲಿ ಹಾಗೂ ಫೆಬ್ರವರಿ 2018 ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಿದ್ದು, ವಿಷಯವಾರು ಪರೀಕ್ಷಾ ದಿನಾಂಕವನ್ನು ತದನಂತರ ನಿಗದಿಪಡಿಸಿ, ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗುವುದು.
ಅರ್ಜಿಗಳನ್ನು ಆನ್-ಲೈನ್ (Online) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.



ಸೇರ್ಪಡೆ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ: http://www.kpsc.kar.nic.in/ADDENDUM%20FDA%20&%20SDA-2017.pdf

*******************


ಇನ್ನಷ್ಟು ಸರ್ಕಾರಿ ನೇಮಕಾತಿ updateಗಾಗಿ my job ಆ್ಯಪ್ ಡೌನ್ಲೋಡ್ ಮಾಡಿ
ನಮ್ಮ facebook ಪೇಜ್ ನೋಡಲು ಕ್ಲಿಕ್ ಮಾಡಿ



 

No comments:

Post a Comment

ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ

  ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸೊಸೈಟಿ ವತಿಯಿಂದ ವಾಹನ ಚಾಲಕರು, ಅಟೆಂಡರ್, ಹೌಸ್ಕೀಪ...